ಡಿಜಿಟಲ್ ಇಂಡಿಯಾ
ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ಭಾರತವನ್ನು ಡಿಜಿಟಲ್ ತಂತ್ರಜ್ಞಾನದಲ್ಲಿ ಸಶಕ್ತವಾದ ಸಮಾಜವನ್ನಾಗಿ ಮತ್ತು ವಿವೇಕಯುತ ಆರ್ಥಿಕತೆಯನ್ನಾಗಿ ರೂಪಾಂತರಿಸುವ ಗುರಿಯನ್ನು ಹೊಂದಿರುವ ಭಾರತ ಸರ್ಕಾರದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ಭಾರತದಲ್ಲಿ ಇ-ಆಡಳಿತ ಉಪಕ್ರಮಗಳ ಪ್ರಯಾಣ ವ್ಯಾಪಕವಾದ ವಿಭಾಗೀಯ ಅನ್ವಯಗಳಲ್ಲಿ ನಾಗರಿಕ ಕೇಂದ್ರಿತ ಸೇವೆಗಳಿಗೆ ಪ್ರಾಮುಖ್ಯತೆಯನ್ನು ಕೊಡುವದರಿಂದ 90 ರ ದಶಕದ ಮಧ್ಯಭಾಗದಲ್ಲಿ ಒಂದು ವಿಶಾಲವಾದ ಆಯಾಮವನ್ನು ತೆಗೆದುಕೊಂಡಿತು. ನಂತರ, ಅನೇಕ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ವಿವಿಧ ಇ-ಆಡಳಿತ ಯೋಜನೆಗಳನ್ನು ಆರಂಭಿಸಿದವು. ಈ ಇ-ಆಡಳಿತ ಯೋಜನೆಗಳು ನಾಗರಿಕ ಕೇಂದ್ರಿತವಾಗಿದ್ದರೂ ಸಹ ಅವುಗಳಿಗೆ ಅಪೇಕ್ಷಿತ ಪರಿಣಾಮವನ್ನುಂಟು ಮಾಡಲು ಸಾಧ್ಯವಾಗಲಿಲ್ಲ. ಭಾರತ ಸರ್ಕಾರ ಇ-ಆಡಳಿತ ಯೋಜನೆಯನ್ನು (NeGP) 2006 ರಲ್ಲಿ ಆರಂಭಿಸಿತು.ವಿವಿಧ ಕ್ಷೇತ್ರಗಳನ್ನು ಒಳಗೊಂಡ 31 ಮಿಶನ್ ಮೋಡ್ ಯೋಜನೆಗಳನ್ನು ಆರಂಭಿಸಲಾಯಿತು. ದೇಶಾದ್ಯಂತ ಅನೇಕ ಇ-ಆಡಳಿತ ಯೋಜನೆಗಳು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದರೂ ಸಹ, ಒಟ್ಟಾರೆಯಾಗಿ ಇ-ಆಡಳಿತ ಅಪೇಕ್ಷಿತ ಪರಿಣಾಮವನ್ನು ಬೀರಲು ಮತ್ತು ತನ್ನ ಎಲ್ಲ ಗುರಿಗಳನ್ನು ಪೂರೈಸುವದರಲ್ಲಿ ಯಶಸ್ವಿಯಾಗಲಿಲ್ಲ. ಎಲೆಕ್ಟ್ರಾನಿಕ್ ಸೇವೆಗಳು, ಉತ್ಪನ್ನಗಳು, ಸಾಧನಗಳು ಮತ್ತು ಉದ್ಯೋಗಾವಕಾಶಗಳನ್ನೊಳಗೊಂಡು ಮಾಡುವ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ದೇಶದಲ್ಲಿ ಇ-ಆಡಳಿತವನ್ನು ಜಾರಿ ಮಾಡುವದು ಅತ್ಯಂತ ಅಗತ್ಯವಾಗಿದೆ ಎಂಬುದನ್ನು ಕಾಣಬಹುದಾಗಿದೆ. ಇದಲ್ಲದೆ, ದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ಬಲಗೊಳಿಸುವ ಅಗತ್ಯವಿದೆ. ಮಾಹಿತಿ ತಂತ್ರಜ್ಞಾನದ ಬಳಕೆಯ ಮೂಲಕ ಸಾರ್ವಜನಿಕ ಸೇವೆಗಳ ಇಡೀ ಪರಿಸರ ವ್ಯವಸ್ಥೆಯಲ್ಲಿ ಪರಿವರ್ತನೆಯನ್ನು ತರಲು ಮತ್ತು ಡಿಜಿಟಲ್ ತಂತ್ರಜ್ಞಾನದಲ್ಲಿ ಸಶಕ್ತವಾಗಿರುವ ಸಮಾಜ ಮತ್ತು ವಿವೇಕಯುತ ಆರ್ಥಿಕ ವ್ಯವಸ್ಥೆಯನ್ನಾಗಿ ಭಾರತದ ರೂಪಾಂತರವನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತ ಸರ್ಕಾರ ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಡಿಜಿಟಲ್ ಸಶಕ್ತವಾಗಿರುವ ಸಮಾಜ ಮತ್ತು ವಿವೇಕಯುತ ಆರ್ಥಿಕತೆಯನ್ನಾಗಿ ಭಾರತದ ರೂಪಾಂತರವನ್ನು ದೃಷ್ಟಿಯಲ್ಲಿಟ್ಟುಕೊಂಡು ಡಿಜಿಟಲ್ ಇಂಡಿಯಾ ಪ್ರೋಗ್ರಾಮ್ ಡಿಜಿಟಲ್ ತಂತ್ರಜ್ಞಾನ ಸಶಕ್ತರಾಗಿರುವರು ಸಮಾಜ ಮತ್ತು ಜ್ಞಾನ ಆರ್ಥಿಕ ವ್ಯವಸ್ಥೆಯಾಗಿ ಭಾರತದ ರೂಪಾಂತರ ದೃಷ್ಟಿಕೋನದೊಂದಿಗೆ.